ಗಾಂಧಿನಗರ : ಆರೋಗ್ಯ ಇಲಾಖೆ ವತಿಯಿಂದ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನಕ್ಕೆ ಚಾಲನೆ

0

ಸರ್ಕಾರದ ನಿರ್ದೇಶನದ ಮೇರೆಗೆ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಹುಟ್ಟಿದ ಮಗುವಿನಿಂದ ಐದು ವರ್ಷದ ಮಗುವಿನವರೆಗೆ ಇರುವ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನಕ್ಕೆ ಇಂದು ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಚಾಲನೆ ನೀಡಲಾಯಿತು.


ಸುಳ್ಯ ತಹಶೀಲ್ದಾರ್ ಮಂಜುನಾಥ್ ಅಭಿಯಾನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಭಿಯಾನದ ಬಗ್ಗೆ ಮಾಹಿತಿ ನೀಡಿದ ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ ನಂದಕುಮಾರ್ ‘ ಯಾವುದೇ ಮಕ್ಕಳು, ಅಥವಾ ಗರ್ಭವತಿ ಸ್ತ್ರೀಯರು ಆರೋಗ್ಯ ಇಲಾಖೆ ವತಿಯಿಂದ ನೀಡಲ್ಪಡುವ ಚುಚ್ಚು ಮುದ್ದುಗಳಿಂದ ವಂಚಿತರಾಗಬಾರದು. ಅಲ್ಲದೆ ಚುಚ್ಚು ಮದ್ದುಗಳು ಸರಿಯಾದ ಸಮಯಕ್ಕೆ ಲಭಿಸದೆ ಮಕ್ಕಳಲ್ಲಿ ಅಥವಾ ಗರ್ಭವತಿ ಮಹಿಳೆಯರಿಗೆ ಅನಾರೋಗ್ಯಗಳು ಉಂಟಾಗಿ ಯಾವುದೇ ತೊಂದರೆಗಳು ಉಂಟಾಗಬಾರದೆಂದು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.
ಆದ್ದರಿಂದ ಸುಳ್ಯ ತಾಲೂಕಿನಾದ್ಯಂತ ಅಭಿಯಾನವು ಯಶಸ್ವಿ ಕಾರಿಯಾಗಲು ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ತಾಲೂಕಿನ ಬೇರೆಬೇರೆ ಕಡೆಗಳಲ್ಲಿ ಇಂದು ಅಭಿಯಾನವನ್ನು ಆರಂಭಿಸಲಾಗಿದೆ.


ಸಣ್ಣಪುಟ್ಟ ಮಕ್ಕಳಿಗೆ ಇರುವ ಚುಚ್ಚುಮದ್ದುಗಳನ್ನು ಹೊರ ಊರಿನವರು ಕೂಡ ಸುಳ್ಯಕ್ಕೆ ನೆಂಟರ ಮನೆಗೆ ಬಂದವರು ಕೂಡ ಆ ದಿನಗಳಲ್ಲಿ ಅವುಗಳನ್ನು ಪಡೆಯುವ ಅವಕಾಶವಿದೆ. ಕೇವಲ ಅವರದೇ ಊರುಗಳಲ್ಲಿ ಪಡೆಯಬೇಕೆಂಬ ಯಾವುದೇ ನಿರ್ಬಂಧಗಳು ಇದರಲ್ಲಿ ಇಲ್ಲ. ಆದ್ದರಿಂದ ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಸರಕಾರಗಳು ಮಕ್ಕಳಿಗೆ ಮತ್ತು ಗರ್ಭವತಿಯರಿಗೆ ನೀಡುವ ಚುಚ್ಚುಮದ್ದುಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವಂತೆ ಸಲಹೆ ಮತ್ತು ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಬಾಲ ವಿಕಾಸ ಸಮಿತಿ ಅಧ್ಯಕ್ಷ ಶ್ರೀಮತಿ ವನಿತಾ ಉಪಸ್ಥಿತರಿದ್ದರು.
ಬಿ ಎಚ್ ಇ ಒ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.
ಸ್ಥಳೀಯ ಅಂಗನವಾಡಿ ಶಿಕ್ಷಕಿ ಶೋಭಾ ಎಸ್, ಸಹಾಯಕಿ ಪುಷ್ಪಾವತಿ ,ಸುಳ್ಯ ಆರೋಗ್ಯ ಇಲಾಖೆಯ ಮೇಲ್ವಿಚಾರಕರಾದ ಹಿಮಲೇಶ್ವರಿ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಸ್ಥಳೀಯ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.