ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ- ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಗೆ ಪ್ರಥಮ ಸಮಗ್ರ ಪ್ರಶಸ್ತಿ

0

ಸರಕಾರಿ ಪದವಿ ಪೂರ್ವ ಕಾಲೇಜು ಪಂಜ ಇಲ್ಲಿ ನಡೆದ ಪ್ರೌಢಶಾಲಾ ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿದ್ಯಾ ಬೋಧಿನಿ ಪ್ರೌಢಶಾಲೆ ಬಾಳಿಲ ಪ್ರಥಮ ಸ್ಥಾನವನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರು .ಕನ್ನಡ ಭಾಷಣ -ಚಿಂತನಾಕೆ ಸಂಸ್ಕೃತ ಭಾಷಣ- ಪ್ರತೀಕ ಕೆಎಂ ಹಿಂದಿ ಭಾಷಣ –ಕಾರ್ತಿಕ್ ಎನ್ ಇಂಗ್ಲಿಷ್ ಭಾಷಣ –ಕ್ಷಮ ಧಾರ್ಮಿಕ ಪಠಣ ಸಂಸ್ಕೃತ –ಶಿವಕೃಷ್ಣ ಎನ್ ಕವನ ವಾಚನ– ಸೃಷ್ಟಿ . ಛದ್ಮವೇಷ– ಕುಲದೀಪ್ .ದ್ವಿತೀಯ ಸ್ಥಾನ ಪಡೆದವರು.

ಭಾವಗೀತೆ –ನಿತ್ಯಶ್ರೀ ಭರತನಾಟ್ಯ –ಆಶಿಕಾ ಚರ್ಚಾ ಸ್ಪರ್ಧೆ– ವೇದಿನಿ. ತೃತೀಯ ಸ್ಥಾನ ಪಡೆದವರು. ಅರೇಬಿಕ್ ಧಾರ್ಮಿಕ ಪಠಣ –ಪಾತಿ ಮತ್ತಿಲ್ ಬರೀರಾ .ಗಜಲ್ –ಚೈತನ್ಯ .

ಸಾಮೂಹಿಕ ವಿಭಾಗದ ಜಾನಪದ ನೃತ್ಯ ಪ್ರಥಮ –ಶೇಯ ಮತ್ತು ತಂಡ. ಕವ್ವಾಲಿ –ಪ್ರಥಮ- ಅನನ್ಯ ಮತ್ತು ತಂಡ.