ನಕಲಿ ಆಸ್ಪತ್ರೆ ಚೀಟಿ ಮತ್ತು ರೋಗಿಯ ಪೊಟೋ ತೋರಿಸಿ ಹಣ ಕಲೆಕ್ಷನ್ ಮಾಡುತ್ತಿದ್ದ ಇಬ್ಬರ ಬಂಧನ

0

ಆಸ್ಪತ್ರೆಯಲ್ಲಿ ರೋಗಿಯನ್ನು ಡಿಸ್ಚಾರ್ಜ್ ಮಾಡಲು ಹಣ ಬೇಕು ಅಂತ ಹೇಳಿ ಸುಳ್ಯ ಪೇಟೆಯಲ್ಲಿ ‌ಕಲೆಕ್ಷನ್ ಮಾಡುತ್ತಿದ್ದ ಇಬ್ಬರನ್ನು ಸಾರ್ವಜನಿಕರು ಹಿಡಿದು ಪೋಲಿಸರಿಗೆ ಒಪ್ಪಿಸಿದ ಘಟನೆ ನಡೆದಿದೆ.ನಾವು ಮಂಗಳೂರಿನ ದಕ್ಕೆಯವರು.

ಸುಳ್ಯದ ಮೀನು ಉದ್ಯಮಿ ಇಬ್ರಾಹಿಂ ಹಾಜಿಯವರ ಪರಿಚಯ ಇದೆ. ಅವರಲ್ಲಿ ಕಲೆಕ್ಷನ್ ಮಾಡಿ ಬಂದದ್ದು. ಅವರೇ ನಮ್ಮನ್ನು ಕಳುಹಿಸಿದ್ದು ಅಂತ ಹೇಳಿ ಮಂಗಳೂರಿನಲ್ಲಿ ಕಲೆಕ್ಷನ್ ಮಾಡುತ್ತಿದ್ದರು.ಆ ವಿಚಾರದ ಬಗ್ಗೆ ಮಂಗಳೂರಿನ ಬಂದರ್ ಉದ್ಯಮಿಗಳು ಇಬ್ರಾಹಿಂ ಹಾಜಿಯವರಿಗೆ ಪೋನ್ ಮಾಡಿ ನೀವು ಯಾರನ್ನಾದರೂ ಕಲೆಕ್ಷನ್ ಕಳುಹಿಸಿದ್ದಿರ ಎಂದು ವಿಚಾರಿಸಿದ್ದರು.

ಯಾರನ್ನೂ ಕಲೆಕ್ಷನ್ ಕಳುಹಿಸಿಲ್ಲ. ನಾವು ಯಾರಾದರೂ ಬಂದವರಿಗೆ ಕೈಯಲ್ಲಿ ಇದ್ದದ್ದನ್ನೂ ಕೊಡುವುದು ಬಿಟ್ಟು ನಾನು ಕಲೆಕ್ಷನ್ ಕಳುಹಿಸಲಿಲ್ಲ ಎಂದವರು ತಿಳಿದಿದ್ದರು.ಮತ್ತೆ ಕಲೆಕ್ಷನ್ ಮಾಡುವ ವ್ಯಕ್ತಿಗಳು ಅಲ್ಲಿಂದ ಪರಾರಿಯಾಗದ್ದರೆನ್ನಲಾಗಿದೆ.ಸೆ.9 ರಂದು ಅದೇ ಕಲೆಕ್ಷನ್ ಮಾಡುವ ತಂಡ ಸುಳ್ಯ ಪೇಟೆಯಲ್ಲಿ ಬೇರೆ ಬೇರೆ ಉದ್ಯಮಿ ಮತ್ತು ಸಮಾಜ ಸೇವಕರ ಪರಿಚಯ ಹೇಳಿಕೊಂಡು ಕಲೆಕ್ಷನ್ ಮಾಡುತ್ತಿದ್ದರು.

ಇವರ ವರ್ತನೆಯನ್ನು ಕಂಡು ಸಾರ್ವಜನಿಕರಿಗೆ ಸಂಶಯಮೂಡಿ ಕೂಡಲೇ ಸ್ಟೆಪ್ ಕೇರ್ ಪೂಟ್ ವೆರ್ ಬಳಿ ಸಾರ್ವಜನಿಕರು ಅವರನ್ನು ವಿಚಾರಿಸುವಾಗ ಅವರು ನಕಲಿ ಕಲೆಕ್ಷನ್ ಮಾಡುವವರೆಂದು ಗೊತ್ತಾಗಿ ಅವರನ್ನು ಸುಳ್ಯ ಪೊಲೀಸರಿಗೆ ಒಪ್ಪಿಸಿದರು. ಇತ್ತೀಚಿನ ದಿನಗಳಲ್ಲಿ ಹಣ ಮಾಡೋದು ಕೆಲವರಿಗೆ ದಂಧೆಯಾಗಿ ಬಿಟ್ಟಿದೆ. ಅನಾರೋಗ್ಯ ಪೀಡಿತ ವ್ಯಕ್ತಿಯ ಫೋಟೋ ತೋರಿಸಿ ಜನರ ಜೊತೆ ಚಿಕಿತ್ಸೆಗೆ ಹಣ ಬೇಕೆಂದು ಮನವಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ನಾಟಕ ಮಾಡಿಕೊಂಡು ನಕಲಿ ರೂಪದಲ್ಲಿ ಹಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ