ಚಿತ್ರಕಲಾ ಸ್ಪರ್ಧೆ ಉದ್ಘಾಟನೆ
🔸 ಶ್ರೀ ದೇವರಿಗೆ ಬೆಳ್ಳಿ ಕಿರೀಟ
🔸 ಡಾ.ವಿದ್ಯಾಭೂಷಣರಿಂದ ಭಕ್ತಿಗಾನ ಸುಧೆ, ಲಘು ಸಂಗೀತ, ನೃತ್ಯ ವೈವಿಧ್ಯ
🔸 ಆಕರ್ಷಣೆಯ ಶೋಭಾಯಾತ್ರೆ, ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳು
ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ-2023 ಇದರ ವತಿಯಿಂದ ಜರಗುವ
ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ-ರಜತ ಸಂಭ್ರಮ ಸೆ.19ರಿಂದ ಸೆ.21ತನಕ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ಜರುಗಲಿದೆ.
ಚಿತ್ರಕಲಾ ಸ್ಪರ್ಧೆ ಉದ್ಘಾಟನೆ:
ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ -ರಜತ ಸಂಭ್ರಮ ಅಂಗವಾಗಿ ಸಾಂಸ್ಕೃತಿಕ ಸ್ಪರ್ಧೆಗಳ ಭಾಗವಾಗಿ ಚಿತ್ರಕಲಾ ಸ್ಪರ್ಧೆಯು ಪಂಜ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಕೇಂದ್ರದಲ್ಲಿ ಸೆ.17 ರಂದು ನಡೆಯಿತು.
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಯವರು ಚಿತ್ರ ಬಿಡಿಸಿ ವಿಶಿಷ್ಟ ರೀತಿಯ ಚಾಲನೆ ನೀಡಿದರು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸವಿತಾರ ಮುಡೂರು ಸಭಾಧ್ಯಕ್ಷತೆ ವಹಿಸಿದ್ದರು. ಆರಾಧನಾ ಸಮಿತಿಯ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ , ಸಾಂಸ್ಕೃತಿಕ ಸ್ಪರ್ಧೆಯ ಸಂಚಾಲಕ ಸತೀಶ್ ಪಂಜ, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಪವನ್ ಪಲ್ಲತ್ತಡ್ಕ
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುದರ್ಶನ್ ಪಟ್ಟಾಜೆ ಪ್ರಾರ್ಥಿಸಿದರು. ಸತೀಶ್ ಪಂಜ ಸ್ವಾಗತಿಸಿದರು.ಕೌಶಿಕ್ ಕುಳ ನಿರೂಪಿಸಿದರು.ಪವನ್ ಪಲ್ಲತ್ತಡ್ಕ ವಂದಿಸಿದರು.
ಸೆ.19.ರಂದು ಕಾರ್ಯಕ್ರಮಗಳು:
ಸೆ.19ರಂದು ಪೂರ್ವಾಹ್ನ ಗಂಟೆ 9 ರಿಂದ ಪ್ರತಿಷ್ಠೆ ಗಣಪತಿ ಹೋಮ,ರಜತ ಸಂಭ್ರಮದ ಸವಿನೆನಪಿಗಾಗಿ ಶ್ರೀ ಮಹಾಗಣಪತಿಗೆ
ಬೆಳ್ಳಿ ಕಿರೀಟ ಸಮರ್ಪಣೆ,ಶ್ರೀ ಶಾರದಾಂಬಾ ಭಜನೆ ಮಂಡಳಿಯ ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಗಂಟೆ 12.45 ರಿಂದ ಮಹಾಪೂಜೆ, ಪ್ರಸಾದ ವಿತರಣೆ ,ಅನ್ನ ಸಂತರ್ಪಣೆ, ಸಂಜೆ ಪಂಬೆತ್ತಾಡಿ ಪಂಚಶ್ರೀ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ಜರುಗಲಿದೆ.
ಪೂರ್ವಾಹ್ನ ಗಂಟೆ 9.30ಕ್ಕೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆಗೊಳ್ಳಲಿದೆ. ಕ್ರೀಡಾ ಸ್ಪರ್ಧೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ಉದ್ಘಾಟಿಸಲಿದ್ದಾರೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಉದ್ಘಾಟಿಸಲಿದ್ದಾರೆ.
ಕ್ರೀಡಾ ಸ್ಪರ್ಧೆಗಳು:
ಪೂರ್ವಾಹ್ನ ಗಂಟೆ.10 ರಿಂದ ಅಂಗನವಾಡಿ ಮತ್ತು ಎಲ್ ಕೆ ಜಿ, ಯು ಕೆ ಜಿ ಮಕ್ಕಳಿಗೆ ಕಪ್ಪೆ ಜಿಗಿತ, ಕಾಳು ಹೆಕ್ಕುವುದು. ಮಹಿಳೆಯರಿಗೆ ಬಾಟಲಿಗೆ ನೀರು ತುಂಬಿಸುವುದು, ಸ್ಕಿಪ್ಪಿಂಗ್ (ಹಗ್ಗ ಜಿಗಿತ), ಹುಡುಗಿಗೆ ಜಡೆ ಬರೆಯುವುದು, ಮಡಿಕೆ ಒಡೆಯುವುದು, ಹಗ್ಗ ಜಗ್ಗಾಟ. ಪುರುಷರಿಗೆ ನಿಧಾನ ದ್ವಿ-ಚಕ್ರ ವಾಹನ ಚಾಲನೆ, ನಿಧಾನ ಸೈಕಲ್ ಚಾಲನೆ, ವಾಲಿಬಾಲ್, ಹಗ್ಗ ಜಗ್ಗಾಟ, ಕಬಡ್ಡಿ ಜರುಗಲಿದೆ.
ಪೂರ್ವಾಹ್ನ ಗಂಟೆ10 ರಿಂದ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ ಜರುಗಲಿದೆ. ಪ್ರಥಮ ರೂ. 2000, ದ್ವಿತೀಯ ರೂ.1000 ನಗದು ಬಹುಮಾನವಿರುತ್ತದೆ. ಹಗ್ಗ ಜಗ್ಗಾಟ ಸ್ಪರ್ಧೆ ಪುರುಷರ ವಿಭಾಗದ ಸ್ಪರ್ಧೆ 7 ಸದಸ್ಯರ ಹೊಂದಿರುವ ತಂಡ ಆಗಿರಬೇಕು. ಪ್ರಥಮ ರೂ.2000,ದ್ವಿತೀಯ ರೂ.1000 ನಗದು ಬಹುಮಾನವಿರುತ್ತದೆ. ಮಹಿಳಾ ವಿಭಾಗದಲ್ಲಿ 7 ಸದಸ್ಯರ ಹೊಂದಿರುವ ತಂಡವಾಗಿರಬೇಕು. ಪ್ರಥಮ ರೂ.1500, ದ್ವಿತೀಯ ರೂ.1000 ನಗದು ಬಹುಮಾನವಿರುತ್ತದೆ. ಪುರುಷರ 65 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟ ಪೂರ್ವಾಹ್ನ ಗಂಟೆ 9.30ರಿಂದ ಪ್ರಾರಂಭಗೊಳ್ಳಲಿದೆ. ಪ್ರಥಮ ರೂ.5555, ದ್ವಿತೀಯ ರೂ 3333, ಸೆಮಿ ಫೈನಲ್ ನಲ್ಲಿ ನಿರ್ಗಮಿತ ಎರಡು ತಂಡಗಳಿಗೆ ತಲಾ 1111 ನಗದು ಬಹುಮಾನವಿರುತ್ತದೆ.
ಸಾಂಸ್ಕೃತಿಕ ಸ್ಪರ್ಧೆಗಳು: ಸಾಂಸ್ಕೃತಿಕ ಸ್ಪರ್ಧೆಗಳು ಎಲ್ ಕೆ ಜಿ, ಯು ಕೆ ಜಿ, ಕಿರಿಯ, ಹಿರಿಯ, ಮಹಿಳಾ , ಸಾರ್ವಜನಿಕ ವಿಭಾಗ ಗಳಲ್ಲಿ ಜರುಗಲಿದೆ. ಪೂರ್ವಾಹ್ನ ಗಂಟೆ.9.30ರಿಂದ ರಂಗೋಲಿ, ರಸಪ್ರಶ್ನೆ, ಭಾಷಣ, ಅಪರಾಹ್ನ ಗಂಟೆ 3ರಿಂದ ಭಕ್ತಿ ಗೀತೆ ಮತ್ತು ಛದ್ಮವೇಷ ಜರುಗಲಿದೆ.
ಸಭಾ ಕಾರ್ಯಕ್ರಮ;
ಸಂಜೆ ಗಂಟೆ 7 ರಿಂದ ಸಭಾ ಕಾರ್ಯಕ್ರಮ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪಂಜ ಸಾರ್ವಜನಿಕ ಆರಾಧನಾ ಸಮಿತಿ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ಕೆರೆ ಪ್ರಧಾನ ಭಾಷಣ ಮಾಡಲಿದ್ದಾರೆ. ಸಾರ್ವಜನಿಕ ಶ್ರೀ ಗಣೇಶೋತ್ಸವದ 25 ವರ್ಷಗಳ ಅಧ್ಯಕ್ಷರುಗಳಿಗೆ ಸನ್ಮಾನ ಜರುಗಲಿದೆ. ಆರಾಧನಾ ಸಮಿತಿಯ ಗೌರವಾಧ್ಯಕ್ಷ ಜಾಕೆ ಮಾಧವ ಗೌಡ ರವರು ಸನ್ಮಾನಿಸಲಿದ್ದಾರೆ. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸವಿತಾರ ಮುಡೂರು ಉಪಸ್ಥಿತರಿರುವರು.
ರಾತ್ರಿ ಗಂಟೆ 8:30 ರಿಂದ ಮಹಾಪೂಜೆ ,ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರುಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ:
. ಸಂಜೆ ಗಂಟೆ5.30ರಿಂದ ರಂಜನಿ ಸಂಗೀತ ಸಭಾ -ಪಂಜ ಶಾಖೆ ಯವರ ಪ್ರಸ್ತುತಿಯ ಲಘು ಸಂಗೀತ..
ರಾತ್ರಿ ಗಂಟೆ 9 ರಿಂದ ಕೆ ಎಸ್ ಎಸ್ ಕಾಲೇಜು ಸುಬ್ರಮಣ್ಯ ಸಾಂಸ್ಕೃತಿಕ ಕಲಾ ತಂಡ ಪ್ರಸ್ತುತಿಯ ‘ನೃತ್ಯ ವೈಭವ ‘ ಜರುಗಲಿದೆ.
ಸೆ.20: ಕಾರ್ಯಕ್ರಮಗಳು :
ಸೆ.20. ರಂದು ಪೂರ್ವಾಹ್ನ ಗಂಟೆ 8.15 ರಿಂದ ಬೆಳಗಿನ ಪೂಜೆ, ಕೇನ್ಯ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ , ಅಳ್ಪೆ ಚಿಂಗಾಣಿ ಗುಡ್ಡೆ ಶ್ರೀ ವಿಷ್ಣು ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಗಂಟೆ 12:45 ರಿಂದ ಮಹಾಪೂಜೆ ಪ್ರಸಾದ ವಿತರಣೆ, ಸಂಜೆ ಪಂಜ ವನಿತಾ ಮಹಿಳಾ ಭಜನಾ ಮಂಡಳಿ,ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳಿಂದ ಭಜನಾ ಸಂಕೀರ್ತನೆ.
ಸಭಾ ಕಾರ್ಯಕ್ರಮ:
ರಾತ್ರಿ ಗಂಟೆ 7.30ರಿಂದ ಸಭಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯ ಅಧ್ಯಕ್ಷ ಸವಿತಾರಾ ಮುಡೂರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬೆಂಗಳೂರು ಉದ್ಯಮಿ ಡಿ ಕಿರಣ್ ಚಂದ್ರ ಪಾಲ್ಗೊಳ್ಳಲಿದ್ದಾರೆ. ಅರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹವ್ಯಾಸಿ ಯಕ್ಷಗಾನ ಅರ್ಥದಾರಿ ಜಯಪ್ರಕಾಶ್ ಎಂ ಆರ್ ಉಪನ್ಯಾಸ ನೀಡಲಿದ್ದಾರೆ. ಆರಾಧನಾ ಸಮಿತಿ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ ಉಪಸ್ಥಿತರಿರುವರು.
ರಾತ್ರಿ 8.30ರಿಂದ ಮಹಾ ಪೂಜೆ, ಪ್ರಸಾದ ವಿತರಣೆ ಜರುಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ :
ಸಂಜೆ ಗಂಟೆ 6ರಿಂದ ಜೀವನ್ ಬೆಳ್ಳಾರೆ ನಿರ್ದೇಶನದ ಡ್ಯಾನ್ಸ್ & ಬೀಟ್ ನೃತ್ಯ ಕಲಾ ಕೇಂದ್ರ ಪಂಜ ಪ್ರಸ್ತುತಿಯ ನೃತ್ಯ ವೈವಿಧ್ಯ.ರಾತ್ರಿ 8.30ರಿಂದ ಸಂಗೀತ ವಿದ್ಯಾನಿಧಿ ಡಾ.ವಿದ್ಯಾಭೂಷಣ ಬೆಂಗಳೂರು ಪ್ರಸ್ತುತಿಯ ಭಕ್ತಿ ಗಾನ ಸುಧೆ ನಡೆಯಲಿದೆ.
ಸೆ .21: ಶೋಭಾಯಾತ್ರೆ ಜಲಸ್ತಂಭನ:
ಸೆ. 21ರಂದು ಪೂರ್ವಾಹ್ನ ಗಂಟೆ 8.15 ರಿಂದ ಬೆಳಗಿನ ಪೂಜೆ, ನಾಗತೀರ್ಥ ಪಂಚಲಿಂಗೇಶ್ವರ ಭಜನಾ ಮಂಡಳಿ, ಓಂಕಾರ ಭಜನಾ ಮಂಡಳಿ ಎಣ್ಮೂರು ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ.
ಸಂಜೆ ಗಂಟೆ 3ರಿಂದ ವೈಭವದ ಶೋಭಾಯಾತ್ರೆಯು ದೇಗುಲದ ವಠಾರದಿಂದ ಪಂಜ ಪೇಟೆಯ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಪಂಜ ಹೊಳೆಯ ನಾಗತೀರ್ಥ ಸಂಗಮದಲ್ಲಿ ಜಲಸ್ತಂಭನ ಜರುಗಲಿದೆ. ಶೋಭಾಯಾತ್ರೆಯಲ್ಲಿ
ತುಳುನಾಡಿನ ಹೆಮ್ಮೆಯ ಹುಲಿ ವೇಷ, ಕೀಲು ಕುದುರೆ ,ಕುಣಿತ ಭಜನೆ
ಮೊದಲಾದ ತಂಡಗಳು ಪಾಲ್ಗೊಳ್ಳಲಿವೆ.