ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ಲೇ ಹೋಂ ನ ವಿದ್ಯಾರ್ಥಿ ಮೂರು ವರ್ಷದ ಜಸೀಲ್ ರಹ್ಮನ್ ನಿಗೆ ಅಭಿನಂದನಾ ಸಭೆಯನ್ನು ಸೆ.16 ರಂದು ಆಯೋಜಿಸಲಾಗಿತ್ತು.
ಸುಳ್ಯದಿಂದ ಪ್ರಥಮ ಬಾರಿಗೆ ಜಗತ್ತಿನ ಸುಂದರ ಸ್ಥಳಗಳಲ್ಲೊಂದಾದ ಜಮ್ಮು ಕಾಶ್ಮೀರದ ಲಡಾಖ್ ಗೆ ಸುಳ್ಯದ ಯುವ ಉದ್ಯಮಿ ಹಳೆ ಗೇಟಿನಲ್ಲಿರುವ ಹೋಂ ಗ್ಯಾಲರಿ ಮಾಲಕ ತೌಹೀದ್ ರೆಹ್ಮಾನ್ ಮತ್ತು ಅವರ ಪತ್ನಿ ಜಸ್ಮಿಯ ತಮ್ಮ ಜಸೀಲ್ ರಹ್ಮಾನ್ ಮಗುವಿನೊಂದಿಗೆ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ (17498) ಗಿಂತ ಎತ್ತರದ ವಿಶ್ವದ ಅತಿ ಎತ್ತರದ ಮೋಟಾರ್ ಪಾಸ್ (19024 ಅಡಿ ಎತ್ತರ )ದ ಮೈಟಿ ಉಮ್ಲಿಂಗ್ಲಾ ಪಾಸ್ ಅನ್ನು ತಲುಪಿದ್ದಾರೆ. ಇಲ್ಲಿ ಜಸೀಲ್ ರಹ್ಮಾನ್ ಆಮ್ಲಜನಕದ ಮಟ್ಟವು 50 ಆಗಿರುವಲ್ಲಿ ಅತ್ಯಧಿಕ ಮೋಟಾರು ಎತ್ತರವನ್ನು ತಲುಪಿದ ಅತ್ಯಂತ ಕಿರಿಯ ಮಗು ಎಂಬ ರೆಕಾರ್ಡ್ ಮಾಡಿದ್ದಾನೆ. ಇವರ ಸಾಧನೆಯನ್ನು ಗುರುತಿಸಿ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಡಾ. ಉಜ್ವಲ್ ಯು. ಜೆ ‘ ಈ ಪುಟ್ಟ ಪೋರನ ಸಾಧನೆ ಅತ್ಯದ್ಭುತವಾದುದು. ಇನ್ನು ಮುಂದೆ ಕೂಡ ಇವನಿಗೆ ಉಜ್ವಲ ಭವಿಷ್ಯ ಲಭಿಸಲಿ ‘ ಎಂದು ಶುಭ ಹಾರೈಸಿದರು. ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ‘ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆಯಲಿರುವ ಜಸೀಲ್ ರೆಹ್ಮಾನ್ ನಮ್ಮ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಜೊತೆಗೆ ಇವನ ಪೋಷಕರ ಸಾಧನೆಯನ್ನು ಮೆಚ್ಚುವಂತದ್ದು’ ಎಂದು ಹೇಳಿದರು. ಬಳಿಕ ತೌಹೀದ್ ರೆಹ್ಮಾನ್ ಅವರು ತಮ್ಮ 31 ದಿನಗಳ ಪ್ರಯಾಣದ ಅನುಭವವನ್ನು ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಂಡರು.
ತಮ್ಮ ಪ್ರಯಾಣದಿಂದಾದ ಸಂತೋಷಕ್ಕಾಗಿ ವಿದ್ಯಾರ್ಥಿಗಳಿಗೆ ಸಿಹಿಯನ್ನು ಹಂಚಿ ಸಂಭ್ರಮಿಸಿದರು. ಬಳಿಕ ಜಸೀಲ್ ರೆಹ್ಮಾನ್ ಮತ್ತು ಆತನ ಪೋಷಕರಿಗೆ ಶಾಲು ಶಾಲು ಹೊದಿಸಿ, ಸ್ಮರಣಿಕೆಯನ್ನು ಕೊಟ್ಟು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಅಮರ ಜ್ಯೋತಿ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ,ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದದವರು ಉಪಸ್ಥಿತರಿದ್ದರು.