ಸುಳ್ಯ ಬಿಜೆಪಿ ಮಂಡಲ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ

0

ಗ್ರಾಮ ಗ್ರಾಮಗಳಲ್ಲಿ ಅಭಿವೃದ್ಧಿಯೊಂದಿಗೆ ಸ್ವಚ್ಛತೆ ಹಾಗೂ ಆರೋಗ್ಯ ಬಹಳ ಮುಖ್ಯ : ಭಾಗೀರಥಿ ಮುರುಳ್ಯ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯ ಜನ್ಮ ದಿನಾಚರಣೆಯ ಈ ಶುಭದಿನದಂದು ನಾವು ಸು ಳ್ಯ ಬಿಜೆಪಿ ಮಂಡಲ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಳದ ದರ್ಪಣ ತೀರ್ಥ ನದಿಯನ್ನ ಸ್ವಚ್ಛಗೊಳಿಸುವ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮಹಾತ್ಮ ಗಾಂಧೀಜಿ ಕಂಡ ಕನಸು ನಮ್ಮ ರಾಜ್ಯ, ದೇಶ ರಾಮ ರಾಜ್ಯವಾಗಬೇಕಾದರೆ ಗ್ರಾಮ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯದೊಂದಿಗೆ ಸ್ವಚ್ಛತೆಯನ್ನ ಮಾಡಿ ಮುಂದುರೆಯಬೇಕು. ಸ್ವಚ್ಛತೆ ಹಾಗೂ ಆರೋಗ್ಯ ಬಹಳ ಮುಖ್ಯ. ಆದ್ದರಿಂದ ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಮುಂದುವರೆಯಲು ಸ್ವಚ್ಛತೆ ಮತ್ತು ಆರೋಗ್ಯವನ್ನು ಜೊತೆ ಜೊತೆಯಾಗಿ ಸೇರಿಸಿಕೊಂಡು ಕೆಲಸ ಮಾಡಿದಾಗ ಮಾತ್ರ ಸಾಧ್ಯ .

ಪ್ರಧಾನಿ ನರೇಂದ್ರ ಮೋದಿಯವರ ಕನಸು ಸ್ವಚ್ಛ ಭಾರತ ನಿರ್ಮಾಣ ಮಾಡುವ ದೃಷ್ಟಿಯಿಂದ ಇಂದು ಈ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ದೇಶದಲ್ಲಿದೆ ಗಾಂಧೀಜಿಯ ಜನ್ಮದಿನದಂದು ಆಚರಿಸಲಾಗುತ್ತದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದೂರ ದೂರಗಳಿಂದ ಬರುವ ಭಕ್ತಾದಿಗಳು, ಸಾರ್ವಜನಿಕರು ತಮ್ಮೊಂದಿಗೆ ತರುವ ಪ್ಲಾಸ್ಟಿಕ್ ಹಾಗೂ ಇನ್ನಿತರ ಬಟ್ಟೆಬರೆಗಳನ್ನು ಕಂಡ ಕಂಡಲ್ಲಿ ಎಸೆಯುವುದು, ಹೊಳೆಯಲ್ಲೇ ಬಿಸಾಡುವುದನ್ನು ಮಾಡಬಾರದು. ಸ್ವಚ್ಛ ಸಮಾಜ ನಿರ್ಮಾಣವಾಗಬೇಕಾದರೆ ನಿಮ್ಮ ಸಹಕಾರ ಕೂಡ ಅಗತ್ಯ. ತಾವು ತಮ್ಮೊಂದಿಗೆ ತಂದಂತಹ ನೀರಿನ ಬಾಟಲಿ, ಬಟ್ಟೆ ಬರೆಗಳು, ಆಹಾರ ಪಟ್ಟಣಗಳನ್ನ ತಾವೇ ಅದನ್ನ ತಮ್ಮ ಚೀಲದಲ್ಲಿ ತುಂಬಿಸಿಕೊಂಡು ಹೋಗಿ ಕಸ ಶೇಖರಣೆ ಇರುವಲ್ಲಿ ಹಾಕಬೇಕು .ಹಾಗಿದ್ದಾಗ ಮಾತ್ರ ನಾವು ಕ್ಷೇತ್ರವನ್ನ ಸ್ವಚ್ಛವಾಗಿರಿಸಿಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ ಸುಳ್ಳಿ, ಸದಸ್ಯರುಗಳಾದ ಪ್ರಸನ್ನ ದರ್ಬೆ, ಲೋಕೇಶ್ ಮುಂಡೋಕಜೆ ,ಎ.ಬಿ. ಮನೋಹರ ರೈ ,ಶೋಭಾ ಗಿರಿಧರ್, ಚಂದ್ರಶೇಖರ ಮರ್ದಾಳ, ಬಿಜೆಪಿ ಹಿರಿಯ ಮುಖಂಡ ಏ. ವಿ. ತೀರ್ಥರಾಮ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಆಶಾ ತಿಮ್ಮಪ್ಪ ಗೌಡ, ಕೃಷ್ಣ ಶೆಟ್ಟಿ ಕಡಬ ,ಸುಬ್ರಹ್ಮಣ್ಯ ಬಿಜೆಪಿ ಗ್ರಾಮದ ಅಧ್ಯಕ್ಷ ದಿನೇಶ ಸಂಪ್ಯಾಡಿ, ಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ನಡು ತೋಟ,

ಬಿಜೆಪಿ ಮುಖಂಡರುಗಳಾದ ಮುಳಿಯ ಕೇಶವ ಭಟ್ ,ರಮೇಶ್ ಕಲ್ಪುರ, ಮೇದಪ್ಪ ಗೌಡ ಡಿಪ್ಪುಣಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಸುಜಾತ ಕಲ್ಲಾಜೆ, ಉಪಾಧ್ಯಕ್ಷ ಎಚ್ಎಲ್ ವೆಂಕಟೇಶ್, ಚಿದಾನಂದ ಕಂದಡ್ಕ ,ಲಲಿತ ಗುಂಡಡ್ಕ, ಮುಂತಾದವರು ಉಪಸ್ಥಿತರಿದ್ದರು. ನಂತರ ಎಲ್ಲಾ ಸಂಘ-ಸಂಸ್ಥೆಗಳನ್ನು ಒಳಗೊಂಡು ದರ್ಪಣ ತೀರ್ಥ ನದಿಯನ್ನು ಸ್ವಚ್ಛಗೊಳಿಸಲಾಯಿತು.