ಕೊಡಗು ಸಂಪಾಜೆ : ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಪುಡಿಮಾಡಿದ ಕಿಡಿಗೇಡಿಗಳು

0

ಕಿಡಿಗೇಡಿಗಳು ಸೇರಿ ರಸ್ತೆಯಲ್ಲಿ ಬಿಯರ್ ಬಾಟ್ಲಿಗಳನ್ನು ಎಸೆದು ಪುಡಿ ಮಾಡಿರುವ ಘಟನೆ ಕೊಡಗು ಸಂಪಾಜೆ ಗ್ರಾಮದ ಚಡಾವಿನಿಂದ ಮೇ 17ರಂದು ವರದಿಯಾಗಿದೆ.

ಚಡಾವು ಬದಿಯಂಗಾನ ದೈವಸ್ಥಾನ ಸಂಪರ್ಕಿಸುವ ರಸ್ತೆಯಲ್ಲಿ ಕಿಡಿಗೇಡಿಗಳು ಹಲವು ಬಿಯರ್ ಬಾಟಲಿಗಳನ್ನು ರಸ್ತೆಗೆ ಎಸೆದು, ಪುಡಿ ಪುಡಿ ಮಾಡಿ ಹಾಕಿದ್ದು,

ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಮತ್ತು ವಾಹನ ಸವಾರರು ಜಾಗೃತೆ ವಹಿಸಬೇಕಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಯವರು ಗಮನಹರಿಸಬೇಕಾಗಿ ಸ್ಥಳೀಯರು ತಿಳಿಸಿದ್ದಾರೆ.