ಸಮಸ್ತ ವಿದ್ಯಾಭ್ಯಾಸ ಕ್ಕೆ ಪ್ರಾಧಾನ್ಯ ಕಲ್ಪಿಸುತ್ತಾ ಬಂದಿದೆ : ಸಯ್ಯಿದುಲ್ ಉಲಮಾ
ಸುಳ್ಯ ಅಜ್ಜಾವರ ಗ್ರಾಮದ ಅಡ್ಕ ಬಯಂಬು ಎಜು ಗಾರ್ಡನ್ ನಲ್ಲಿ ಕರ್ನಾಟಕದ ಪ್ರಥಮ ಸಮಸ್ತ ನ್ಯಾಷನಲ್ ಎಜುಕೇಷನ್ ಕೌನ್ಸಿಲ್ ಇದರ ವಸತಿ ಸೌಕರ್ಯಗಳನ್ನೂಳಗೊಂಡ ಮಹಿಳಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಮೇ.16ರಂದು ನಡೆಯಿತು.
ಸಮಸ್ತದ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಪ್ರಿ ಮುತ್ತುಕೋಯ ತಂಙಳ್ ಮಾತನಾಡಿ “ಸಮಸ್ತ ದ ಸೇವೆಗಳನ್ನು, ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ವ್ಯಾಪಿಸಲು ಸಮಸ್ತ ನ್ಯಾಷನಲ್ ಎಜುಕೇಶನ್ ಕೌನ್ಸಿಲ್ ಪ್ರಾರಂಭಿಸಿದೆ. ಕರ್ನಾಟಕದಲ್ಲಿ ಬಹಳ ವರ್ಷಗಳಿಂದ ಸಮಸ್ತ ದ ಕಾರ್ಯಚಟುವಟಿಕೆಗಳು ಪ್ರಾರಂಭವಾಗಿದೆ. ಅದನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಇದೆ. ಸಮಸ್ತ ವಿದ್ಯಾಭ್ಯಾಸ ಕ್ಕೆ ಪ್ರಾದಾನ್ಯ ಕಲ್ಪಿಸುತ್ತಾ ಬಂದಿದೆ. ಇಲ್ಲಿರುವ ಉಲಮಾ ಉಮರಾ ಪಂಡಿತರು ಕರ್ನಾಟಕದ ಮೊದಲ ವಸತಿ ಸೌಕರ್ಯಗಳನ್ನು ಒಳಗೊಂಡ ಸಮಸ್ತ ದ ಕಟ್ಟಡ ತಲೆ ಎತ್ತಿ ನಿಲ್ಲಲು ಸಾಧ್ಯವಾಗುವ ಎಲ್ಲಾ ಸಹಾಯ ಸಹಕಾರ ನೀಡಬೇಕು. ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಅತ್ಯಂತ ಸುರಕ್ಷಿತವಾಗಿರಬೇಕು ಎಂಬ ನಿಟ್ಟಿನಲ್ಲಿ ಸುತ್ತಲು ಆವರಣಗೋಡೆಯನ್ನು ರಚಿಸಿ ಉತ್ತಮ ವಾತಾವರಣ, ವಸತಿ ಸೌಕರ್ಯದೊಂದಿಗೆ ಪೂರ್ಣ ಸ್ವಾತಂತ್ರ್ಯದಲ್ಲಿ, ಗುಣಮಟ್ಟದ ಶಿಕ್ಷಣವನ್ನು ನೀಡಲಾಗುವುದು. ಕಂಪ್ಯೂಟರ್ ಮತ್ತು ಮೊಬೈಲ್ ನ್ನು ಒಳ್ಳೆಯದಕ್ಕೆ ಉಪಯೋಗಿಸಬೇಕೆಂದು ಅವರು ಹೇಳಿದರು.
ಅತಿಥಿಗಳಾಗಿ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಕೊಡಗು ಖಾಝಿ ಶೈಖುನಾ ಅಬ್ದುಲ್ಲ ಮುಸ್ಲಿಯಾರ್, ಹುಸೈನ್ ಸಯ್ಯದ್ ಹಕೀಂ ತಂಗಳ್ ಆದೂರು, ಹುಸೈನ್ ತಂಗಳ್ ಆದೂರು, ಗೂನಡ್ಕ ತೆಕ್ಕಿಲ್ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಎಸ್ ಕೆ ಎಸ್ ಎಸ್ ಎಫ್ ಈಸ್ಟ್ ಜಿಲ್ಲಾ ಅಧ್ಯಕ್ಷ ಮಹಮ್ಮದ್ ನವವಿ ಮುಂಡೊಲೆ,
ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಅನೀಸ್ ಕೌಸರಿ, ನ್ಯಾಯವಾದಿ ಪವಾಝ್, ಹಾಜಿ ಇಬ್ರಾಹಿಂ ಕತ್ತರ್, ರಶೀದ್ ಹಾಜಿ ಪರ್ಲಡ್ಕ, ಹಮಿದ್ ಹಾಜಿ ಸುಳ್ಯ, ಎಲ್ ಟಿ ಅಬ್ದುಲ್ ರಜಾಕ್ ಹಾಜಿ, ತಾಜ್ ಮೊಹಮ್ಮದ್ ಸಂಪಾಜೆ, ಅಬೂಬಕ್ಕರ್ ಪೂಪಿ, ತಾಜುದ್ದೀನ್ ರಹ್ಮಾನಿ, ಇಸ್ಮಾಯಿಲ್ ಯಮಾನಿ, ಹಸೈನಾರ್ ದರ್ಮತಣ್ಣಿ, ಖತ್ತರ್ ಇಬ್ರಾಹಿಂ ಹಾಜಿ, ಸೇರಿದಂತೆ ಹಲವಾರು ಮಹಲ್ ಜಮಾಹತ್ ಖತೀಬ್ ಉಸ್ತಾದರು ಆಡಳಿತ ಸಮಿತಿ ಸದಸ್ಯರು ಧಾರ್ಮಿಕ ಸಾಮಾಜಿಕ ರಾಜಕೀಯ ನಾಯಕರು ಉಪಸ್ಥಿತರಿದ್ದರು ಆಲಿ ದಾರಿಮಿ ಸ್ವಾಗತಿಸಿದರು, ಮೊಹಿದ್ದೀನ್ ಅನ್ಸಾರ್ ವಂದಿಸಿದರು.