ಮಳೆಗಾಲ ಬಂದರೆ ಸುಳ್ಯದ ಹಳೆಗೇಟಿನಲ್ಲಿ ತೀರದ ಗೋಳು
ನದಿಯಂತಾಗುವ ಮಾಣಿ- ಮೈಸೂರು ಹೆದ್ದಾರಿ
ಮಳೆಗಾಲ ಬಂದಾಕ್ಷಣ ವರ್ಷಂಪ್ರತಿ ಕಾಣಿಸಿಕೊಳ್ಳುವ ದೊಡ್ಡ ಸಮಸ್ಯೆ ಹಳೆಗೇಟಿನಲ್ಲಿ ರಸ್ತೆ ತುಂಬಾ ತುಂಬಿಕೊಳ್ಳುವ ಮಳೆಯ ನೀರು.
ಈ ಸಮಸ್ಯೆ ಇಂದು ನಿನ್ನೆಯದಲ್ಲ. ಕಳೆದ ಹಲವಾರು ವರ್ಷಗಳಿಂದ ಈ ಭಾಗದ ಜನತೆ ರಸ್ತೆಯಲ್ಲಿ ತುಂಬುವ ಮಳೆಯ ನೀರಿನಿಂದಾಗಿ ತೊಂದರೆಯನ್ನು ಅನುಭವಿಸುವುದು ಸಹಜವಾಗಿದೆ.
ರಸ್ತೆಯಲ್ಲಿ ಸುಮಾರು ಎರಡು ಅಡಿಯಷ್ಟು ನೀರು ತುಂಬಿ ನಿಲ್ಲುತ್ತಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಸಮಸ್ಯೆಗೆ ಸಂಬಂಧ ಪಟ್ಟವರು ಅನೇಕ ಬಾರಿ ಪ್ರಯತ್ನವನ್ನು ಮಾಡಿದ್ದರೂ ಇಂದಿಗೂ ಶಾಶ್ವತ ಪರಿಹಾರ ಸಿಕ್ಕಿಲ್ಲ.
ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.