ಪಂಜ ಲಯನ್ಸ್ ಭವನಕ್ಕೆ 100 ಆಸನಗಳನ್ನು ಕೊಡುಗೆಯಾಗಿ ಘೋಷಿಸಿದ ಡಾ.ರೇಣುಕಾಪ್ರಸಾದ್ ಕೆ.ವಿ.

0


ನೂತನವಾಗಿ ನಿರಾಣಗೊಂಡ ಪಂಜ ಲಯನ್ಸ್ ಭವನಕ್ಕೆ ರೂ.25 ಸಾವಿರ ದೇಣಿಗೆ ನೀಡಿರುವ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ಕಮಿಟಿ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ.ಯವರು ಇಂದು ಭವನಕ್ಕೆ 100 ಆಸನಗಳನ್ನು ಕೊಡುಗೆಯಾಗಿ ಘೋಷಿಸಿದರು.


ಲಯನ್ಸ್ ಭವನದ ಉದ್ಘಾಟನೆಯ ದಿನವಾದ ಜೂ.1 ರಂದು ಅಪರಾಹ್ನ ಚಿಕ್ಕಮಗಳೂರಿಗೆ ಹೋಗುವ ದಾರಿಯಲ್ಲಿ ಪಂಜಕ್ಕೆ ಬಂದು ಲಯನ್ಸ್ ಭವನಕ್ಕೆ ಭೇಟಿ ನೀಡಿದ ಅವರು ಈ ಘೋಷಣೆ ಮಾಡಿದರು.


ಲಯನ್ಸ್ ಭವನಕ್ಕೆ ಆಗಮಿಸಿದ ಡಾ.ರೇಣುಕಾಪ್ರಸಾದ್ ದಂಪತಿಯನ್ನು ಲಯನ್ಸ್ ಪದಾಧಿಕಾರಿಗಳು ಹಾರ್ದಿಕವಾಗಿ ಸ್ವಾಗತಿಸಿ ವೇದಿಕೆಗೆ ಕರೆದೊಯ್ದು ಸನ್ಮಾನಿಸಿದರು.

ಬಳಿಕ ಮಾತನಾಡಿದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜ್ ಸಿ.ಇ.ಒ. ಉಜ್ವಲ್ ಯು.ಜೆ. ಯವರು ಡಾ.ರೇಣುಕಾಪ್ರಸಾದ್ ರವರು ಲಯನ್ಸ್ ಸಭಾಭವನಕ್ಕೆ 100 ಚೆಯರ್ ಗಳನ್ನು ನೀಡಲು ನಿರ್ಧರಿಸಿರುವುದಾಗಿ ಘೋಷಿಸಿದರು.


ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಜಾಕೆ ಮಾಧವ ಗೌಡ, ಲಯನ್ಸ್ ಭವನ ಕಟ್ಟಡ ಸಮಿತಿ ಅಧ್ಯಕ್ಷ ಸಂತೋಷ್ ಜಾಕೆ, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಮತ್ತು ಇತರ ಪದಾಧಿಕಾರಿಗಳು, ಡಾ.ಜ್ಯೋತಿ ರೇಣುಕಾಪ್ರಸಾದ್, ಕೆ.ವಿ.ಜಿ. ಡೆಂಟಲ್ ಕಾಲೇಜ್ ಆಡಳಿತಾಧಿಕಾರಿ ಮಾಧವ ಬಿ.ಟಿ., ರೇಣುಕಾಪ್ರಸಾದರ ಆಪ್ತ ಕಾರ್ಯದರ್ಶಿ ಪ್ರಸನ್ನ ಕಲ್ಲಾಜೆ ಉಪಸ್ಥಿತರಿದ್ದರು. ಶಶಿಧರ ಪಳಂಗಾಯ ಕಾರ್ಯಕ್ರಮ ನಿರ್ವಹಿಸಿದರು.