ಜಾಲ್ಸೂರು ಪಯಸ್ವಿನಿ ಪೌಢಶಾಲೆಗೆ ಸಂಸದ ಕ್ಯಾ.ಬೃಜೇಶ್ ಚೌಟ ಭೇಟಿ

0

ದ.ಕ. ಸಂಸದ ಕ್ಯಾ.ಬೃಜೇಶ್ ಚೌಟ ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಗೆ ಜು.10 ರಂದು ಭೇಟಿ ನೀಡಿದರು. ಸಂಸದರಾಗಿ ಶಾಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿದ ಸಂಸದರನ್ನು ಶಾಲಾ ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ ಮೂಲಕ ಸ್ವಾಗತಿಸಿದರು.


ಪಯಸ್ವಿನಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡರು ಬೃಜೇಶ್ ಚೌಟರನ್ನು ಶಾಲು, ಹಾರ, ಹೂಗುಚ್ಛ ನೀಡಿ ಗೌರವಿಸಿದರು. ಬಳಿಕ ಸಂಸದರು ಶಾಲಾ ಆವರಣದಲ್ಲಿ ಹಲಸಿನ ಗಿಡವನ್ನು ನೆಟ್ಟರು. ನಂತರ ಶಾಲಾ ಕಚೇರಿಯಲ್ಲಿ ಶಾಲಾಭಿವೃದ್ಧಿಯ ಕುರಿತು ದೇರಣ್ಣ ಗೌಡರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ವೆಂಕಟ್ ವಳಲಂಬೆ, ಜಯರಾಮ ರೈ ಜಾಲ್ಸೂರು, ಬಾಬು ಕೆ.ಎಂ., ಹೇಮಂತ್ ಮಠ, ಶಾಲಾ ಮುಖ್ಯಶಿಕ್ಷಕಿ ಜಯಲತಾ, ಸಹಶಿಕ್ಷಕರು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.


ಸಂಸದ ಕ್ಯಾ.ಬೃಜೇಶ್ ಚೌಟರು ಪಯಸ್ವಿನಿ ಪ್ರೌಢಶಾಲೆಗೆ ಭೇಟಿ ನೀಡಿದ ಸಂದರ್ಭ ತರಗತಿ ಕೋಣೆಗಳಿಗೆ ಹೋಗಿ ವಿದ್ಯಾರ್ಥಿಗಳೊಂದಿಗೆ ಬೆರೆತು, ಕುಶಲೋಪರಿ ವಿಚಾರಿಸಿದರು.