ಅಂಜಲಿ ಮೊಂಟೆಸ್ಸರಿ ಸ್ಕೂಲ್‌ ಅಡ್ಕಾರ್ ಆರ್ಕೆಡ್ ಗೆ ಸ್ಥಳಾಂತರಗೊಂಡು ಶುಭಾರಂಭ

0

ಪ್ರಶಾಂತ ವಾತಾವರಣದೊಂದಿಗೆ, ನಗರ ಮಾದರಿಯ ಉತ್ತಮ ಶಿಕ್ಷಣ ಪದ್ಧತಿ

ಸುಳ್ಯದ ವರ್ತಕರ ಭವನದಲ್ಲಿ ಕಾರ್ಯಚರಿಸುತ್ತಿದ್ದ ಅಂಜಲಿ ಮೊಂಟೆಸ್ಸರಿ ಸ್ಕೂಲ್ ಆಯುರ್ವೇದ ಕಾಲೇಜು ಮುಂಭಾಗವಿರುವ ಅಡ್ಕಾರ್ ಆರ್ಕೆಡ್ ಗೆ ಜು.13 ರಂದು ಸ್ಥಳಾಂತರಗೊಡು ಶುಭಾರಂಭಗೊಂಡಿತು.

ಜು.12 ರಂದು ಶಾಲೆಯಲ್ಲಿ ಗಣಪತಿ ಹವನ ನಡೆಯಿತು.

ಪೆರ್ನಾಜೆ ಎಸ್ ಎಸ್ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ, ಸಂಗೀತ ಶಿಕ್ಷಕ ಕೆ.ಆರ್. ಗೋಪಾಲಕೃಷ್ಣ ಸಂಸ್ಥೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಚ್ .ಮಾಧವ ಭಟ್ ಉಪಸ್ಥಿತರಿದ್ದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹಾಗೂ ವೇದಿಕೆಯಲ್ಲಿ ನ್ಯಾಯವಾದಿಗಳಾದ ಎಂ ವೆಂಕಪ್ಪ ಗೌಡ, ಕಟ್ಟಡ ಮಾಲಕರಾದ ದಿನೇಶ್ ಅಡ್ಕಾರ್ ದಂಪತಿ, ನಗರ ಪಂಚಾಯತ್ ಸದಸ್ಯೆ ಕಿಶೋರಿ ಶೇಟ್, ವೇದಿಕೆಯಲ್ಲಿ ಉಪಸ್ಥಿತರಿದ್ದು , ಶುಭ ಹಾರೈಸಿದರು.

ಹಾಗೂ ಶಾಲಾ ನಿರ್ದೇಶಕಿ ಗೀತಾಂಜಲಿ ಟಿ.ಜಿ. ಹಾಗೂ ಅಧ್ಯಕ್ಷರಾದ ಶುಭಕರ ಬಿಸಿ ವೇದಿಕೆಯಲ್ಲಿದ್ದರು.

ಶಾಲೆಯ ಪೋಷಕಿ, ಎನ್ ಎಂ ಪಿ ಯು ಕಾಲೇಜಿನ ಉಪನ್ಯಾಸಕಿ ಶ್ರೀಮತಿ ವಿನುತಾ ಕೆಎನ್ ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಕಟ್ಟಡ ಮಾಲಕರಾದ ದಿನೇಶ್ ಅಡ್ಕಾರ್ ದಂಪತಿ ಹಾಗೂ ಶಾಲೆಯ ಟ್ರಸ್ಟಿ ,
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದ ಸದಾನಂದ ಮಾವಂಜಿ ಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಶಾಲಾ ವಿದ್ಯಾರ್ಥಿಗಳಾದ ಸಾಧ್ವಿನಿ, ಹೃದನ್, ಪ್ರಜ್ಯೋತ್ ಮತ್ತು ಮನ್ಹಾ ಫಾತಿಮಾ ಪ್ರಾರ್ಥಿಸಿದರು. ಕೌಶಿಕ್ ಕುಳ ಕಾರ್ಯಕ್ರಮ ನಿರೂಪಿಸಿದರು.

ಮುಖ್ಯ ಅತಿಥಿಗಳಾದ ಎಚ್ .ಮಾಧವ ಭಟ್ ರವರು
ಪೋಷಕರಿಗೆ ಮಾಹಿತಿ
ನೀಡಿ ಪಾಲಕರಾಗಿ ಪ್ರತಿಯೊಬ್ಬ ತಂದೆ ತಾಯಿಯು ತಮ್ಮ ಮಕ್ಕಳನ್ನು ಸಾಕಿ ಸಲಹಿ ಪೋಷಿಸಿ ಕಾಳಜಿಯಿಂದ ಮಾರ್ಗದರ್ಶನ ನೀಡಿ ಒಳ್ಳೆಯ ವ್ಯಕ್ತಿಯನ್ನಾಗಿಸಲು ಬಯಸುತ್ತಾರೆ ಹಾಗಾಗಿ
ಮಕ್ಕಳ ಗುಣ ಹಾಗೂ ನಡತೆಯಿಂದ ಪೋಷಕರ ಹಾಗೂ ಮಕ್ಕಳ ಸಂಬಂಧ ಹೇಗಿದೆಯೆಂದು ತಿಳಿಯುತ್ತದೆ.
ಕಾರಣ ಮಕ್ಕಳು ನಾವು ಹೇಳಿಕೊಟ್ಟದ್ದನ್ನು ಕಲಿಯುವುದಕ್ಕಿಂತ ನಾವೇನು ಮಾಡುತ್ತೇವೋ ಅದನ್ನು ನೋಡಿ ಕಲಿಯುತ್ತಾರೆ ಹಾಗಾಗಿ ಮಕ್ಕಳ ಎದುರು ಪೋಷಕರು ಒಳ್ಳೆಯ ರೀತಿಯಲ್ಲಿ ಇರುವುದು ಉತ್ತಮ ಹಾಗೂ ಪೋಷಕರ ಹಾಗೂ ಮಕ್ಕಳ ಸಂಬಂಧಗಳ ಕುರಿತ ಹಲವಾರು ವಿಚಾರಗಳನ್ನು ತಿಳಿಸಿಕೊಟ್ಟರು.


ಅಂಜಲಿ ಮೊಂಟೇಸರಿ ಸ್ಕೂಲ್ ನಲ್ಲಿ ಈಗಿನ ಕಾಲಕ್ಕೆ ಅನುಗುಣವಾಗಿ ಮೊಂಟೇಸರಿ ಪದ್ಧತಿಯಲ್ಲಿ ಪ್ರಶಾಂತ ವಾತಾವರಣದೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ, ಪ್ಲೇ ಏರಿಯಾ, ಪ್ರತ್ಯೇಕ ತರಗತಿ, ಮಧ್ಯಾನದ ಊಟ, ಉತ್ತಮ ಶಿಕ್ಷಕ ವರ್ಗವಿರುತ್ತದೆ.
ಹಾಗೂ ಇಲ್ಲಿ ಟ್ಯೂಷನ್ ಹಾಗೂ ಸಂಗೀತ, ಚಿತ್ರಕಲೆ, ನವೋದಯ ಕೋಚಿಂಗ್ ಕ್ಲಾಸ್ ಗಳು ಕೂಡ ನೀಡಲಾಗುತ್ತದೆ.