ಕೆಲವೇ ನಿಮಿಷಗಳ ಕಾಲ ಕೊಲ್ಲಮೊಗ್ರು ಪರಿಸರದಲ್ಲಿ ಆ.20 ರಂದು ಮಧ್ಯಾಹ್ನ ಸುರಿದ ಭಾರೀ ಮಳೆಯಿಂದ ಕೊಲ್ಲಮೋಗ್ರು ಪೇಟೆಯಿಂದ ಪಡಿಕಲ್ಲು ಚಾಳೆಪ್ಪಾಡಿಗೆ ಹೋಗುವ ರಸ್ತೆಯು ಹಳ್ಳದಂತಾಗಿ ಆ ಭಾಗದ ಜನರಲ್ಲಿ ಭಯ
ಹುಟ್ಟಿಸಿತ್ತು .
ಇಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೆರೆ ಉಂಟಾಗುತ್ತಿದೆ. ರಸ್ತೆ ಕಳೆದ ಹಲವಾರು ವರುಷಗಳಿಂದ ಈ ಭಾಗದ ಜನ ಇದೆ ಕಷ್ಟ ಅನುಭವಿಸುತ ಬಂದಿದ್ದಾರೆ.
ಎಷ್ಟು ಬಾರಿ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದರು ಇದುವರೆಗೂ ಯಾವದೇ ಪ್ರಯೋಜನ ದೊರಕದೆ ಈ ಭಾಗದ ಜನ ಕಂಗಲಾಗಿದ್ದಾರೆ .
ಕಳೆದ ಕೆಲವು ತಿಂಗಳ ಹಿಂದೆ ಕೊಲ್ಲಮೊಗ್ರು ನಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ದಲ್ಲಿಯೂ ಜಿಲ್ಲಾಧಿಕಾರಿ ಯವರಿಗೆ ಮನವಿ ಮಾಡಿದರು ಪ್ರಯೋಜನ ವಾಗಿಲ್ಲ. ಇದೇ ರಸ್ತೆಯಲ್ಲಿ ಪ್ರತೀ ದಿನ ವಿದ್ಯಾರ್ಥಿಗಳು,ಸೇರಿದಂತೆ ಗ್ರಾಮಸ್ಥರು ನಡೆದು ಹೋಗುತ್ತಾರೆ.ಅದಕ್ಕಾಗಿ ಸಂಬಂಧ ಪಟ್ಟವರು ಗಮನ ಸರಿ ಪಡಿಸ ಬೇಕಾಗಿದೆ.
.