ಪತ್ರಿಕಾಗೋಷ್ಠಿಯಲ್ಲಿ ಉಪಾಸನ ಬಳಗದವರಿಂದ ಮಾಹಿತಿ
ಸದ್ಗುರುಶ್ರೀ ರಾಮರವರ ದಿವ್ಯ ಮಾರ್ಗದರ್ಶನದಲ್ಲಿ ಸುಳ್ಯದ ಗೌಡ ಸಮುದಾಯ ಭವನದಲ್ಲಿ ಫೆ. 9ರಂದು ಬೆಳಿಗ್ಗೆ 9:30 ರಿಂದ ಸಂಜೆ 4 ಗಂಟೆಗೆ ತನಕ ಮನೋಶಕ್ತಿ ಕಾರ್ಯಗಾರ ನಡೆಯಲಿದೆ ಎಂದು ಉಪಾಸನ ಫೌಂಡೇಶನ್ ಶ್ರೀ ಉಪಾಸಕರಾದ ಎನ್. ಪಿ ಧರ್ಮತೇಜ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜ. 25ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಕಾರ್ಯಾಗಾರದಲ್ಲಿ
ಸಂಕಲ್ಪದ ಸರಿಯಾದ ಕ್ರಮ,
ಸುಪ್ತವಾದ ಮನೋಶಕ್ತಿಯನ್ನು ಹೇಗೆ ಜಾಗೃತಗೊಳಿಸುವುದು,
ಮನೋಶಕ್ತಿಯ ಅರಿವು ಹಾಗೂ ಅದನ್ನು ಬಳಸಿ ಯಶಸ್ಸು ಗಳಿಸುವುದು ಹೇಗೆ?
ಶ್ವಾಸಕ್ರಿಯೆ, ವಿಶ್ವಾಕರ್ಷಣ ಧ್ಯಾನವಿಧಿ, ಮುದ್ರೆ, ಗುರಿಯ ನಿರ್ಣಯ, ನಿರ್ಣಯಿಸಿದ ಗುರಿಯನ್ನು ತಲುಪುವ ಹಾದಿ, ಭಾವನೆ ಹಾಗೂ ಬದುಕನ್ನು ಯಾವ ರೀತಿ ದೃಢಪಡಿಸುವುದು.
ಇನ್ನೂ ಅನೇಕ ವಿಚಾರಗಳನ್ನು ಹೇಳಿಕೊಡುತ್ತಾರೆ. ಮತ್ತು ಇದರ ಅಭ್ಯಾಸಕ್ಕೆ ಆಡಿಯೋ ಫೈಲ್ ಅನ್ನು ಕೂಡಾ ಕೊಡುತ್ತೇವೆ. ತನ್ನುಖೇನ ನಿಶ್ಚಿತ ಗುರಿಯನ್ನು ತಲುಪಿ ಇಚ್ಛಿಸಿದನ್ನು ಪಡೆದು ಸುಂದರ ಜೀವನವನ್ನು ಕಟ್ಟಿಕೊಳ್ಳಬಹುದು.
ಆಧ್ಯಾತ್ಮ ಸಾಧನೆಯ ರಹಸ್ಯ ಭಾವನೆ ದೃಢವಾದಂತೆ ಬದುಕು ಸುಂದರ. ಬಯಸಿದ್ದನ್ನು ಪಡೆಯುವ ಸುಪ್ತ ಮನೋಶಕ್ತಿಯ ಪವಾಡ ಅರಿಯಲು ಈ ಕಾರ್ಯಗಾರ ಸಹಕಾರಿಯಾಗಬಲ್ಲದು. ಅಲ್ಲದೆ
ಈ ಕಾರ್ಯಗಾರದ ಅಭ್ಯಾಸದ ನಿರಂತರ ಸಾಧನೆಯಿಂದ ಜೀವನದ ನಿಶ್ಚಿತ ಗುರಿಯನ್ನು ತಲುಪಲು ಸಾಧ್ಯವಾಗಬಲ್ಲದು. ಸನಾತನ ಹಿಂದೂ ಪರಂಪರೆಯ ಗುರು ಪದ್ಧತಿಯ ಅನುಷ್ಠಾನದಲ್ಲಿ ನಡೆಯುವ ಈ ಕಾರ್ಯಗಾರದಲ್ಲಿ ಭಾಗವಹಿಸಲು ಈಗಾಗಲೇ ಹಲವಾರು ಮಂದಿ ಆನ್ಲೈನ್ ಮೂಲಕ ನೊಂದಾವಣಿಯಾಗಿದ್ದಾರೆ” ಎಂದು ತಿಳಿಸಿದರು.
ಸದ್ಗುರುಶ್ರೀಗಳು ಮೂಲತಃ ಬೆಂಗಳೂರಿನವರಾಗಿದ್ದು, ತಮ್ಮ ಆಧ್ಯಾತ್ಮಿಕ ಜೀವನದ ಬಹುಪಾಲನ್ನು ಹಿಮಾಲಯದ ಪರ್ವತ ಶ್ರಣಿಯಲ್ಲಿ ಸಾಧು ಸಂತರ ಜೊತೆ ಕಳೆದು ಆಧ್ಯಾತ್ಮಿಕತೆಯ ಉನ್ನತ ಹಂತದಲ್ಲಿ ಆತ್ಮ ಸಾಕ್ಷಾತ್ಕಾರ ಕಂಡುಕೊಂಡವರು. ತನ್ಮುಖೇನ ಸಾಧನೆ, ಸೇವೆ ಮತ್ತು ಪ್ರೀತಿ ಎಂಬ ಮೂರು ಮನುಷ್ಯ ಸಹಜ ಗುಣಗಳನ್ನು ಆಸಕ್ತರಿಗೆ ಬೋಧಿಸುವ ನಿಟ್ಟಿನಲ್ಲಿ ಉಪಾಸನ ಫೌಂಡೇಶನ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಸ್ವಸ್ಥ ವ್ಯಕ್ತಿ, ಸ್ವಸ್ಥ ಕುಟುಂಬ ಮತ್ತು ಸ್ವಸ್ಥ ಸಮಾಜ ನಿರ್ಮಾಣದ ಧ್ಯೇಯವನ್ನು ಇಟ್ಟುಕೊಂಡಿದ್ದಾರೆ. ನಮ್ಮ ದೇಶ ಹಾಗೂ ಪರದೇಶಗಳ ಹಲವು ವ್ಯಕ್ತಿಗಳು, ಕುಟುಂಬಗಳು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸದ್ಗುರುಶ್ರೀ ಯವರು ಆಸಕ್ತರಿಗೆ ಉಪಾಸನ ಫೌಂಡೇಶನ್ ನಲ್ಲಿ ಕ್ರಿಯಾಯೋಗ, ಮನೋಶಕ್ತಿ, ಸಮೂಹನ ತಂತ್ರ, ಶಕ್ತಿ ಕ್ರಿಯಾ, ಕುಂಡಲಿನಿ ದೀಕ್ಷೆ, ದೇವಿ ಸಾಧನ ದೀಕ್ಷೆ ಅನ್ನೋ ವಿದ್ಯೆಗಳನ್ನು ಧಾರೆಯೆರೆಯುತ್ತಿದ್ದಾರೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಸನ ಫೌಂಡೇಶನ್ ನ ಶ್ರೀ ಉಪಾಸಕರಾದ ಡಾ. ಮಧುಮಿತ, ನಟರಾಜ್ ಭಟ್ ಪುತ್ತೂರು, ಯಶವಂತ, ಮಂಜುನಾಥ್, ರಾಕೇಶ್, ಪವಿತ್ರ ಉಪಸ್ಥಿತರಿದ್ದರು.