ಭಾರೀ ಗಾಳಿಗೆ ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಇರುವ ವಿದ್ಯುತ್ ಗುತ್ತಿಗೆದಾರರ ಸಂಘದ ಕಟ್ಟಡದ ಮೇಲಿನಿಂದ ಮೇಲ್ಚಾವಣಿ ಶೀಟ್ ಹಾರಿ ಪರಿಸರದ ಮುಖ್ಯ ರಸ್ತೆಗೆ ಬಂದು ಅಪ್ಪಳಿಸಿದ ಘಟನೆ ವರದಿಯಾಗಿದೆ.
ಈ ಕಟ್ಟಡದ ಮೂರನೇ ಅಂತಸ್ತಿನಲ್ಲಿ ತಗಡಿನ ಶೀಟಿನಿಂದ ಮೇಲ್ಚಾವಣಿ ಅಳವಡಿಸಲಾಗಿದ್ದು ಇಂದು ಬೀಸಿದ ಭಾರಿಗಾಳಿಗೆ ಫ್ರೆಮ್ ಸಮೇತ ಹಾರಿ ಕೆಳಭಾಗದಲ್ಲಿರುವ ಕಂದಾಯ ನಿರೀಕ್ಷಕರ ಕಚೇರಿಯ ಮುಂಭಾಗ ರಸ್ತೆಯಲ್ಲಿ ಬಿದ್ದಿದ್ದು ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸಾರ್ವಜನಿಕರು ಮತ್ತು ಯಾವುದೇ ವಾಹನಗಳು ಇಲ್ಲದ ಕಾರಣ ಬಾರಿ ಯಾವುದೇ ಅಪಾಯ ಸಂಭವಿಸಿಲ್ಲ.
ಈ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಕೆವಿಜಿ ಸಂಸ್ಥೆಯಿಂದ ಬರುವ ಸಿಬ್ಬಂದಿಗಳು ನೂರಾರು ಸಂಖ್ಯೆಯಲ್ಲಿ ಬರುವ ರಸ್ತೆಯಾಗಿದ್ದು ಘಟನೆ ನಡೆದ ಸಂದರ್ಭದಲ್ಲಿ ಯಾರು ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.