ಕೊಡಿಯಾಲ: ಬಾಚೋಡಿ ವೆಂಕಟೇಶ ಪೈಯವರ ಮನೆಯಲ್ಲಿ ಪೂಜಿಸಲ್ಪಟ್ಟ ಗಣೇಶ

0

ಕಲ್ಲಗದ್ದೆ ಶ್ರೀ ‌ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿಯ ಅಧ್ಯಕ್ಷ ಬಾಚೋಡಿ ವೆಂಕಟೇಶ ಪೈ ಕೊಡಿಯಾಲ ಇವರ ಮನೆಯಲ್ಲಿ ಪೈ ಕುಟುಂಬಸ್ಥರ 110 ನೇ ವರ್ಷದ ಗಣೇಶೋತ್ಸವ ಸೆ. 19ರಂದು ನಡೆಯಿತು. ಬೆಳಿಗ್ಗೆ ಮತ್ತು ಮಧ್ಯಾಹ್ನ ಪೂಜೆಯ ಬಳಿಕ ಕೆರೆಯ ನೀರಿನಲ್ಲಿ ವಿಸರ್ಜಿಸಲಾಯಿತು. ಬಾಚೋಡಿ ಕುಟುಂಬಸ್ಥರು, ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.