ಶ್ರೀ ದೇವಿ ಭಜನ ಮಂಡಳಿಯಿಂದ ನಡೆದ ಮನೆ‌ಮನೆ ಭಜನೆ ಕಾರ್ಯಕ್ರಮ ಕ್ಕೆ ಮಂಗಲೋತ್ಸವ

0

ಶ್ರೀ ದೇವಿ ಭಜನಾ ಮಂಡಳಿ ಮೆಟ್ಟಿನಡ್ಕ ಮತ್ತು ಶ್ರೀ ನಂದನ ಕಲಾ ಕುಟುಂಬ ಮೆಟ್ಟಿನಡ್ಕ ಇದರ ಜಂಟಿ ಆಶ್ರಯದಲ್ಲಿ, ಕಳೆದ ನವರಾತ್ರಿಯ ಸಂದರ್ಭದಲ್ಲಿ ಪ್ರಾರಂಭಗೊಂಡ ಮನೆ ಮನೆ ಭಜನಾ ಸಂಕೀರ್ತನೆ ಕಾರ್ಯಕ್ರಮದ ಮಂಗಲೋತ್ಸವ ಹಾಗೂ ಗೋ ಪೂಜೆ ಕಾರ್ಯಕ್ರಮ ದಿನಾಂಕ ನ.28ರಂದು ಮೆಟ್ಟಿನಡ್ಕದ ಗುಂಡಡ್ಕ ಕಾಲೋನಿಯಲ್ಲಿ ನಡೆಯಿತು.
ಸಂಜೆ 6 ರಿಂದ 8.30 ತನಕ, ಶ್ರೀ ದೇವಿ ಭಜನಾ ಮಂಡಳಿ ಮೆಟ್ಟಿನಡ್ಕ, ಶ್ರೀ ನಂದನ ಕಲಾ ಕುಟುಂಬ ಮೆಟ್ಟಿನಡ್ಕ ಹಾಗೂ ಶ್ರೀ ಧರ್ಮಶಾಸ್ತಾ ಭಜನಾ ಮಂಡಳಿ ಬಳ್ಪ ಇವರಿಂದ ಕುಣಿತ ಭಜನೆ ನೆರವೇರಿ, ಮಂಗಲೋತ್ಸವ ನಡೆಯಿತು. ಕಾರ್ಯಕ್ರಮ ಆರಂಭದಲ್ಲಿ ಮನೆ ಮನ ಬೆಳಗುವ ಪರಿಕಲ್ಪನೆಯೊಂದಿಗೆ, ಕಾಲೋನಿಯ ಪ್ರತಿ ಮನೆಗಳಿಗೆ ತೆರಳಿ ದೀಪ ಉರಿಸಿ, ಒಂದು ದೀಪದಿಂದ ಮತ್ತೊಂದು ದೀಪ ಬೆಳಗಿಸಿ ಕಾರ್ಯಕ್ರಮ ನಡೆಯುವ ಜಾಗಕ್ಕೆ ತರಲಾಯಿತು.
ಕಳೆದ ನವರಾತ್ರಿ ಯಿಂದ ಪ್ರಾರಂಭಗೊಂಡು ನಾಲ್ಕೂರು ಮತ್ತು ಗುತ್ತಿಗಾರು ಗ್ರಾಮದ ಸುಮಾರು 155 ಮನೆಗಳಲ್ಲಿ ಭಜನಾ ಸಂಕೀರ್ತನೆ ನಡೆಸಲಾಗಿದೆ.


ಉಪನ್ಯಾಸ ಕಾರ್ಯಕ್ರಮ ದಲ್ಲಿ ಅತಿಥಿಗಳಾಗಿ ಮರಕತ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಮಾವಿನಕಟ್ಟೆ ಯವರು ಭಾಗವಹಿಸಿ ಭಜನೆಯ ಮಹತ್ವ ದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ, ಶ್ರೀ ದೇವಿ ಭಜನಾ ಮಂಡಳಿಯ ಅಧ್ಯಕ್ಷರಾದ ಸುಧೀರ್ ಆಮೆ., ಕಾರ್ಯದರ್ಶಿ ಶ್ರೀಮತಿ ರತಿ. ಎಸ್. ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ಬಳಿಕ ಸಾರ್ವಜನಿಕರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ ದ ಅಂಗವಾಗಿ, ಶ್ರೀ ನಂದನ ಕಲಾ ಕುಟುಂಭದ ಸದಸ್ಯರಿಂದ ನೃತ್ಯ ವೈವಿದ್ಯಾ ನಡೆಯಿತು.
ಭಜನಾ ಮಂಡಳಿಯ ಯೋಜನಾ ನಿರ್ದೇಶಕ ರಮೇಶ್ ಮೆಟ್ಟಿನಡ್ಕ, ಕಾರ್ಯಕ್ರಮದ ಪ್ರಸ್ತಾವನೆ ಮಾಡಿದರು. ಕು. ಚೈತನ್ಯ. ಬಿ.ಸಿ. , ಚೈತ್ರಾ. ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ತಂಡದ ಸದಸ್ಯರು ಸಹಕರಿಸಿದರು. ಭರತ್ ಕಾಡುಕೊಲ್ಯ ಸ್ವಾಗತಿಸಿ,
ಕಾರ್ಯದರ್ಶಿ ಶ್ರೀಮತಿ ರತಿ ಎಸ್. ವಂದಿಸಿದರು.
ಎಲ್ಲರಿಗೂ ಕರೀಷ್ಮಾ ಆಗರಬತ್ತಿಗಳು ಬೆಂಗಳೂರು ಇದರ ಮಾಲಕರ ಪ್ರಾಯೋಜಕತ್ವ ದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.