ಅಮೃತ ಜ್ಯೋತಿ ವಾಟ್ಸಾಪ್ ತಂಡದಿಂದ ವಿಶೇಷ ಚೇತನ ಮಕ್ಕಳಿಗೆ ಅನ್ನದಾನ ಮತ್ತು ಬಡ ವಿದ್ಯಾರ್ಥಿಗಳಿಗೆ ಕೊಡುಗೆ ಹಸ್ತಾಂತರ

0

ಬಾಲ ಕಲಾವಿದ ಚಿಂತು ಸುಳ್ಯ ಹಾಗೂ ಅವನ ತಾಯಿ ಶ್ರೀಮತಿ ಲತಾರವರು ಅಡ್ಮಿನ್ ಆಗಿರುವ “ಅಮೃತ ಜ್ಯೋತಿ” ವಾಟ್ಸಪ್ ತಂಡದ ವತಿಯಿಂದ ಸುಳ್ಯದ ಸಾಂದೀಪ್ ವಿಶೇಷ ಚೇತನ ಮಕ್ಕಳಿಗೆ ಅನ್ನದಾನ ಮತ್ತು ಆನಾಥ ಎರಡು ಬಡ ವಿದ್ಯಾರ್ಥಿಗಳಿಗೆ ಬಟ್ಟೆ ಮತ್ತು ಲೇಖನ ಸಾಮಾಗ್ರಿಗಳನ್ನು ಜು.12 ರಂದು ಸಾಂದೀಪ್ ವಿಶೇಷ ಶಾಲೆಯಲ್ಲಿ ವಿತರಿಸಲಾಯಿತು.

ಅಮೃತ ಜ್ಯೋತಿ ವಾಟ್ಸಪ್ ತಂಡ ಸುಮಾರು ಒಂದು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದು, ಮಹಿಳೆಯರ ಮತ್ತು ಪುರುಷರ ಎರಡು ವಾಟ್ಸಪ್ ಗ್ರೂಪ್ ಗಳಿದ್ದು, ಸುಮಾರು 530ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಈ ವಾಟ್ಸಪ್ ಗ್ರೂಪ್ ಗಳಲ್ಲಿರುವ ಸದಸ್ಯರು ಹಾಗೂ ಇತರ ದಾನಿಗಳು ಸೇರಿ ಸಂಗ್ರಹಿತವಾದ ಹಣದಲ್ಲಿ ಮೊದಲ ಯೋಜನೆ ವಿಶೇಷ ಚೇತನ ಮಕ್ಕಳಿಗೆ ಅನ್ನದಾನ, ಪುಸ್ತಕ ವಿತರಣೆ ಮತ್ತು ಎರಡು ಆನಾಥ ಬಡ ವಿದ್ಯಾರ್ಥಿಗಳಾದ, ಕಾಂತಮಂಗಲ ಶಾಲೆಯ ವಿಶಾಲ್ ಮತ್ತು ಕಾರ್ತಿಕ್ ಇವರಿಗೆ ಲೇಖನ, ಬಟ್ಟೆ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಎಂ.ಬಿ ಫೌಂಡೇಶನ್ ಅಧ್ಯಕ್ಷ ಎಂ.ಬಿ ಸದಾಶಿವ, ಖಜಾಂಜಿ ಶ್ರೀಮತಿ ಪುಷ್ಪಾವತಿ ಮಾಣಿಬೆಟ್ಟು, ಟ್ರಸ್ಟಿ ಷರೀಫ್ ಜಟ್ಟಿಪಳ್ಳ, ಪಿ.ಡಬ್ಲ್ಯೂ.ಡಿ. ಕಾಂಟ್ರಾಕ್ಟರ್ ಲೋಹಿತ್ ಹೊದ್ದೆಟ್ಟಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಾಂದೀಪ್ ವಿಶೇಷ ಶಾಲೆಯ
ಸಲಹಾ ಸಮಿತಿ ಸದಸ್ಯ ಯಶ್ವಿತ್ ಕಾಳಮ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ವಂದಿಸಿದರು.